Home ಕರಾವಳಿ ಉಡುಪಿ: ಬಲ್ಲಾಳ್ ಫೈನಾನ್ಸ್ ಮಾಲೀಕ ಮುರಳೀಧರ್ ಬಲ್ಲಾಳ್ ಹೃದಯಾಘಾತದಿಂದ ನಿಧನ

ಉಡುಪಿ: ಬಲ್ಲಾಳ್ ಫೈನಾನ್ಸ್ ಮಾಲೀಕ ಮುರಳೀಧರ್ ಬಲ್ಲಾಳ್ ಹೃದಯಾಘಾತದಿಂದ ನಿಧನ

ಉಡುಪಿ:ಉಡುಪಿ ಮಿತ್ರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಕಾರ್ಯಚರಿಸುತ್ತಿದ್ದ ಬಲ್ಲಾಳ್ ಫೈನಾನ್ಸ್ ಮಾಲೀಕ, ಕಿನ್ನಿಮೂಲ್ಕಿ ಕರ್ನ್ನಪಾಡಿ ನಿವಾಸಿ ಮುರಳೀಧರ್ ಬಲ್ಲಾಳ್ (56) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.

ವಿಪರೀತ ಬೇವರು ಹಾಗೂ ಸುಸ್ತು ಆಗುತ್ತಿದೆ ಎಂದು ಮನೆಯವರಲ್ಲಿ ಹೇಳುತ್ತಿದ್ದ ಅವರು, ಸುಧಾರಿಸಿಕೊಳ್ಳುತ್ತಿದ್ದಂತೆ ಹಠಾತ್ ಆಗಿ ಕುಸಿದು ಬಿದ್ದಿದ್ದರು. ತಕ್ಷಣ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version