Home ಅಪರಾಧ ಮಣಿಪಾಲ: ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಣಿಪಾಲ: ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಡುಪಿ: ನ್ಯಾಯಾಲಯದ ವಾರಂಟ್ ಇದ್ದರೂ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿಯ ಬಡಗಬೆಟ್ಟು ಗ್ರಾಮದ ಆದರ್ಶನಗರದ ನಿವಾಸಿ ಬಾಲಾಜಿ ಬಂಧಿತ ಆರೋಪಿ. ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವನನ್ನು ಬೆಂಗಳೂರು ಹರಳೂರು ಬಸ್ಸು ನಿಲ್ದಾಣ ಬಳಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ, ಪಿಎಸ್‌ಐ ಅನಿಲ್ ಕುಮಾರ್, ಪಿಎಸ್‌ಐ ಅಕ್ಷಯ ಕುಮಾರಿ, ಹೆಚ್.ಸಿ ಥಾಮ್ರನ್, ಪಿಸಿ ರವಿರಾಜ್ ಅವರ ತಂಡ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Exit mobile version