Tuesday, December 3, 2024

ಬೀಡಿನಗುಡ್ಡೆ ತೆರೆದ ಮೈದಾನದ ಅಭಿವೃದ್ಧಿಗೆ ಚಿಂತನೆ: ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್

Must read

ಉಡುಪಿ: ಉಡುಪಿ ನಗರಸಭೆಯ ಆಧೀನದಲ್ಲಿರುವ ಬೀಡಿನಗುಡ್ಡೆಯ ತೆರೆದ ಮೈದಾನದಲ್ಲಿ ನಿರಂತರವಾಗಿ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಮೈದಾನಕ್ಕೆ ಆವರಣ ಗೋಡೆಯಿಲ್ಲದ ಕಾರಣ ಈ ಪರಿಸರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದು ಈ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿವೆ. ಈ ಮೈದಾನದ ಬಗ್ಗೆ ಉಡುಪಿ ನಗರಸಭೆಯ ಅಧ್ಯಕ್ಷರ ಮತ್ತು ಶಾಸಕರ ವಿಶೇಷ ಮುತುವರ್ಜಿಯಿಂದ ಇದನ್ನು ಸಾರ್ವಜನಿಕ ಯೋಗ್ಯ ಕ್ರಿಕೆಟ್ ಮೈದಾನವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಗಂಭೀರ ಚಿಂತನೆಗಳನ್ನು ನಡೆಸಿ ಯೋಜನೆಗಳನ್ನು ಸಿದ್ಧಪಡಿಸಲಾಗಿವೆ ಎಂದು ಉಡುಪಿ ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರು ಮಾಹಿತಿ ನೀಡಿದರು.

ಅವರು ಉಡುಪಿ ನಗರದ ಬೀಡಿನ ಗುಡ್ಡೆ ಮೈದಾನದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇವರು ಆಯೋಜಿಸಿದ ಗ್ಯಾರೇಜ್ ಮಾಲಕರಿಗಾಗಿ ಗ್ಯಾರೇಜ್ ಪ್ರೀಮಿಯರ್ ಲೀಗ್ – ಜಿಪಿಎಲ್ ಸೀಸನ್ -1 ಕ್ರಿಕೆಟ್ ಪಂದ್ಯಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿಯವರು ಮುಂಜಾನೆ ಪಂದ್ಯಕೂಟಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಸೂರಜ್ ಶೆಟ್ಟಿ, ಜಿಲ್ಲಾ ಡಿವೈಎಸ್ಪಿ ಪ್ರಭು ಡಿ.ಟಿ ಉಪಸ್ಥಿತರಿದ್ದರು. ಬಳಿಕ ವಿಜೇತ ತಂಡಳಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ ಕಾಪು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ್.ಕೆ, ಚಯರ್ ಮ್ಯಾನ್ ವಿಲ್ಸನ್ ಅಂಚನ್, ಗೌರವ ಸಲಹೆಗಾರರಾದ ಯಾದವ್ ಶೆಟ್ಟಿಗಾರ್, ಜಯ ಸುವರ್ಣ ಮತ್ತು ಉದಯ್ ಕಿರಣ್, ಉಪಾಧ್ಯಕ್ಷರುಗಳಾದ ರಾಜೇಶ್ ಜತ್ತನ್ ಮತ್ತು ವಿನಯ್ ಕುಮಾರ್ ಕಲ್ಮಾಡಿ, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ, ಪಂದ್ಯಕೂಟದ ಸಂಯೋಜಕರಾದ ರವೀಂದ್ರ ಶೇಟ್, ಮಹೇಶ್ ನಿಟ್ಟೂರು, ನವೀನ್ ಉದ್ಯಾವರ್, ಪದಾಧಿಕಾರಿಗಳಾದ ಕೃಷ್ಣ ಕಟಪಾಡಿ ಹಾಗೂ ವಿಜಯ ಸನಿಲ್, ಜಿಪಿಎಲ್ ತಂಡದ ಮಾಲಕರಾದ ಅರುಣ್ ಕುಮಾರ್ ಅಜೆಕಾರು, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಮತ್ತು ಉಡುಪಿ ಇದರ ಪ್ರಮುಖರಾದ ಜನಾರ್ದನ್ ಅತ್ತಾವರ, ಕಿರಣ್ ರಾಜ್, ಮುರಳಿ ಕೃಷ್ಣ, ರಾಜೇಶ್, ಪುಷ್ಪರಾಜ್ ಶೆಟ್ಟಿ, ಪಂದ್ಯಕೂಟದ ಪ್ರಾಯೋಜಕರಾದ ರಮಾನಾಥ್ ಎಂಟರ್ಪ್ರೈಸಸ್ ನ ಪ್ರಸನ್ನ ಕೆ. ಆರ್, ಮಾರೂರು ಮೋಟರ್ಸ್ ನ ಶಶಿಧರ್ ಪೈ ಮಂಗಳೂರು, ಪಾಪ್ಯುಲರ್ ಪೈಂಟ್ ನ ಉದಯ್ ಕುಮಾರ್ ಉಡುಪಿ, ಸ್ಯಾಮ್ಸನ್ ಎಂಟರ್ಪ್ರೈಸಸ್ ನ ಪರ್ಸಿ ಸ್ಯಾಮ್ಸನ್, ಕ್ಲಾಸಿಕ್ ಆಟೋಮೊಬೈಲ್ಸ್ ನ ಸಂತೋಷ್ ಕುಮಾರ್, ಉಡುಪಿ ಫ್ರೀ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅಶ್ರಫ್, ತಾಲೂಕು ಸಂಘಟನೆಗಳ ಅಧ್ಯಕ್ಷರುಗಳಾದ ನಾರಾಯಣ ಆಚಾರ್ಯ ಕುಂದಾಪುರ, ನಾರಾಯಣ ಪೂಜಾರಿ ಬ್ರಹ್ಮಾವರ, ಕೃಷ್ಣಯ್ಯ ಮದ್ದೋಡಿ ಬೈಂದೂರು, ಅಬ್ದುಲ್ ಮೊಯ್ದಿನ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿ ವಿನಯ್ ಕುಮಾರ್ ವಂದಿಸಿದರು.

spot_img

More articles

LEAVE A REPLY

Please enter your comment!
Please enter your name here