Home ಅಪರಾಧ ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ; 740 ಗ್ರಾಂ ತೂಕ ಗಾಂಜಾ ವಶ

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ; 740 ಗ್ರಾಂ ತೂಕ ಗಾಂಜಾ ವಶ

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್‌ ಸಪಾಝ್‌ (29)ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ ಚರಣ್‌ ಯು ಭಂಡಾರಿ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 53,300 ಸಾವಿರ ಮೌಲ್ಯದ 740 ಗ್ರಾಂ ತೂಕ ಗಾಂಜಾ, KA51AD3933ನೇ HONDA ಕಂಪೆನಿಯ Activa ಸ್ಕೂಟರ್ ಅಂದಾಜು ಮೌಲ್ಯ ರೂ, 25,000, ನಗದು ರೂ, 2170 ಹಾಗೂ ಎರಡು ಮೊಬೈಲ್ ಪೋನ್ ಸಹಿತ ಒಟ್ಟು 98,770 ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ‌.

Exit mobile version