Home ಕರಾವಳಿ ಉಡುಪಿ: 76 ಬಡಗಬೆಟ್ಟು ಗ್ರಾಮದ ಯುವತಿ ನಾಪತ್ತೆ

ಉಡುಪಿ: 76 ಬಡಗಬೆಟ್ಟು ಗ್ರಾಮದ ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಪಿಜಿಯೊಂದರಲ್ಲಿ ವಾಸವಾಗಿದ್ದ ಯೋಗಿತಾ (20) ಎಂಬ ಯುವತಿಯು ಜನವರಿ 2 ರಂದು ಪಿಜಿಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.


157 ಸೆಂ.ಮೀ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದಪ್ಪ ಮೈಕಟ್ಟು, ದುಂಡುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Exit mobile version