Home ಅಪರಾಧ ಉಡುಪಿ: ರಿಕ್ಷಾ ಚಾಲಕನಿಗೆ ಐವರ ತಂಡದಿಂದ ಹಲ್ಲೆ

ಉಡುಪಿ: ರಿಕ್ಷಾ ಚಾಲಕನಿಗೆ ಐವರ ತಂಡದಿಂದ ಹಲ್ಲೆ

ಉಡುಪಿ: ರಿಕ್ಷಾ ಚಾಲಕರೊಬ್ಬರಿಗೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಡಿ.25ರಂದು ತಡರಾತ್ರಿ ಉಡುಪಿ ಕಲ್ಸಂಕ ಬಳಿ ನಡೆದಿದೆ.


ಹಲ್ಲೆಗೊಳಗಾದವರನ್ನು ರಿಕ್ಷಾ ಚಾಲಕ, ಪುತ್ತೂರು ಅಡ್ಕದಕಟ್ಟೆಯ ಮಂಜು ನಾಥ(40) ಎಂದು ಗುರುತಿಸಲಾಗಿದೆ. ಇವರು ರಿಕ್ಷಾ ಚಲಾಯಿಸಿಕೊಂಡು ಬರುತ್ತಿರುವಾಗ ರಸ್ತೆ ಬದಿ ಎರಡು ಬೈಕ್ ನಲ್ಲಿ 5 ಮಂದಿ ಯುವಕರು ಬಾಟಲಿಯನ್ನು ರಸ್ತೆಯ ಮೇಲೆ ಬಿಸಾಡಿದ್ದರು.

ಇದನ್ನು ಪ್ರಶ್ನಿಸಿದಕ್ಕಾಗಿ ಮಂಜುನಾಥ್ ಅವರಿಗೆ ಐವರ ತಂಡ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಅವರು ಬೊಬ್ಬೆ ಹಾಕಿದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version