Thursday, September 19, 2024

ಉದ್ಯಾವರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಸೇಲ್ಸ್ ಮೆನ್

Must read

ಉಡುಪಿ: ಉಡುಪಿ‌ ಉದ್ಯಾವರ ಸೇತುವೆ ಬಳಿ ಬುಧವಾರ ಬೆಳಿಗ್ಗೆ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಉದ್ಯಾವರ ನದಿಯಲ್ಲಿ ಪತ್ತೆಯಾಗಿದೆ.


ಮೃತರನ್ನು ಉಡುಪಿ ಕೋರ್ಟ್ ಬಳಿಯ ನಿವಾಸಿ ರವೀಂದ್ರ ಭಟ್(55) ಎಂದು ಗುರುತಿಸಲಾಗಿದೆ. ಈತ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಾರ್ಸೆಲ್ ತೆಗೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದವನು ಬಳಿಕ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದನು. ಬಳಿಕ‌ ತಿಳಿದುಬಂದ ಮಾಹಿತಿಯಂತೆ‌ ಆತ ಉದ್ಯಾವರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ, ಸೇತುವೆಯ ಮೇಲಿಂದ ನದಿಗೆ ಹಾರಿದ್ದಾನೆ ಎಂದು ಗೊತ್ತಾಗಿದೆ.


ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ದೋಣಿ ಮೂಲಕ ಹುಡುಕಾಟ ನಡೆಸಿದರು. ಸಂಜೆ ವೇಳೆ ವ್ಯಕ್ತಿಯ ಮೃತದೇಹವು ಅಂಕುದ್ರು ಬಳಿ ಪತ್ತೆಯಾಗಿದೆ.
ವ್ಯಕ್ಯಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ರವೀಂದ್ರ ಕಳೆದ 10 ವರ್ಷಗಳಿಂದ ಉಡುಪಿಯ ಪೈ ಇಂಟರ್‌ನ್ಯಾಶನಲ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು

spot_img

More articles

LEAVE A REPLY

Please enter your comment!
Please enter your name here