Thursday, September 19, 2024

ಸಂತೆಕಟ್ಟೆಯ ಪೈಪ್ ಗೋಡಾನ್ ನಲ್ಲಿ ಅಗ್ನಿ ದುರಂತ: ಲಕ್ಷಾಂತರ ರೂ. ಮೌಲ್ಯದ ಪೈಪ್ ಗಳು ಬೆಂಕಿಗಾಹುತಿ

Must read

ಉಡುಪಿ: ಇಲ್ಲಿನ ಸಂತೆಕಟ್ಟೆಯ ಪೈಪ್ ಗೋಡಾನ್ ವೊಂದರಲ್ಲಿ ಇಂದು ಸಂಜೆ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಪೈಪ್ ಗಳು ಸುಟ್ಟು ಕರಕಲಾಗಿವೆ.

ಗೋಡಾನ್ ನಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್ ಗಳನ್ನು ಸಂಗ್ರಹಿಸಲಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ನೂರಾರು ಪೈಪ್ ಗಳು ಸುಟ್ಟು ಹೋಗಿವೆ. ಗೋಡಾನ್ ಪೂರ್ತಿ ಬೆಂಕಿಯ ಕೆನ್ನಾಲಿಗೆ ಹಬ್ಬಿದ್ದು, ಇಡೀ ಪರಿಸರ ದಟ್ಟ ಹೊಗೆಯಿಂದ ಆವರಿಸಿದೆ. ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿಲ್ಲ.

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

spot_img

More articles

LEAVE A REPLY

Please enter your comment!
Please enter your name here