Saturday, November 23, 2024

ಬಾರ್ಕೂರು: ಜೀವರಕ್ಷಕ ಜಯ ಬಂಗೇರ ಇನ್ನಿಲ್ಲ

Must read

ಉಡುಪಿ: ಬಾರ್ಕೂರು ಬೆಣ್ಣೆ ಕುದುರು ನಿವಾಸಿ ಜಯ ಬಂಗೇರ (59 ವರ್ಷ) ಅವರು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮಲ್ಪೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಜಯ ಬಂಗೇರ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಜಯ ಬಂಗೇರ ವೃತ್ತಿಯಲ್ಲಿ ಮೀನುಗಾರರಾಗಿದ್ದು, ಅನೇಕ ಪಾಲಿಗೆ ಜೀವರಕ್ಷಕರಾಗಿದ್ದರು. ಬಾವಿಗೆ ಬಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ, ಹೊಳೆಗಳಲ್ಲಿ ಬಿದ್ದ ಅನಾಥ ಶವಗಳನ್ನು ಮೇಲೆತ್ತಿದ್ದಾರೆ.

spot_img

More articles

LEAVE A REPLY

Please enter your comment!
Please enter your name here