ಉಡುಪಿ: ಹೆರ್ಗ-ಸರಳೇಬೆಟ್ಟು ವಸತಿ ಸಮುಚ್ಚಯದ ಫಲಾನುಭವಿಗಳಿಗೆ ನವೆಂಬರ್ 1ರೊಳಗೆ ಮನೆಗಳನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕೆಂದು ಶಾಸಕ ಯಶ್ ಪಾಲ್ ಸುವರ್ಣ ಸೂಚಿಸಿದರು.
ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಇಂದು ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಡುಪಿ ನಗರದ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ, ಹೆರ್ಗ ಸರಳೇಬೆಟ್ಟು ವಸತಿ ಸಮುಚ್ಚಯದ ಫಲಾನುಭವಿಗಳಿಗೆ ಮನೆ ಹಸ್ತಾಂತರಕ್ಕೆ ಕ್ರಮ, ನಗರೋತ್ಥಾನ ಯೋಜನೆ ಸಹಿತ ಅಭಿವೃದ್ಧಿ ಬಾಕಿಯಿರುವ ಕಾಮಗಾರಿಗಳು, ದಾರಿ ದೀಪ ಸಮರ್ಪಕ ನಿರ್ವಹಣೆ, ಮಳೆ ಅಭಾವದಿಂದ ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿರುವ ಕುಡಿಯುವ ನೀರು ಸಮಸ್ಯೆಗಳ ಬಗ್ಗೆ ಮೊದಲಾದ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಸಭೆಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತರು ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರು, ಉಡುಪಿ ಸಂಚಾರ ಠಾಣೆ ಉಪ ನಿರೀಕ್ಷಕರು, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.