Saturday, January 11, 2025

ಫೆ.7ರಿಂದ ಉಡುಪಿಯಲ್ಲಿ “ಪವರ್ ಪರ್ಬಾ”; ಮಳಿಗೆಗಳ ನೋಂದಣಿ ಪ್ರಕ್ರಿಯೆ ಆರಂಭ

Must read

ಉಡುಪಿ: ಪವರ್ ಸಂಸ್ಥೆಯ ಈ ಬಾರಿಯ “ಪವರ್ ಪರ್ಬಾ” ವು 2025ರ ಫೆಬ್ರವರಿ 7ರಿಂದ 9ರ ವರೆಗೆ ಉಡುಪಿ ಮಿಶನ್ ಕಂಪೌಂಡ್ ಬಳಿತ ಕ್ರಿಶ್ಚಿಯನ್ ಹೈಸ್ಕೂಲ್‌ ಮೈದಾನದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್ ಅವರು, ಪಿ.ಎಂ.ಎಸ್‌. ಸ್ಕೀಮ್ ಆಫ್ ಎಮ್.ಎಸ್.ಎಂ.ಇ ಸಹಯೋಗದೊಂದಿಗೆ ಈ ಬಾರಿಯ ಪವರ್ ಪರ್ಬವನ್ನು ಆಯೋಜಿಸಲಾಗುತ್ತಿದೆ. ಒಟ್ಟು 150ಕ್ಕೂ ಹೆಚ್ಚಿನ ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗಾಗಿ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ 60 ಮಳಿಗೆಗಳು ಪಿ.ಎಂ.ಎಸ್. ಸ್ಕೀಮ್ ಆಫ್ ಎಮ್.ಎಸ್.ಎಂ.ಇ. ಮಳಿಗೆಗಳಾಗಿವೆ. ಈ ಮಳಿಗೆಗಳ ಪ್ರಯೋಜನ ಪಡೆಯುವವರು ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ‌ ಉದ್ಯಮ ಆಧಾ‌ರ್ ಎಂಎಸ್ಎಂಇಯಲ್ಲಿ ನೋಂದಾಯಿತರಾಗಿರಬೇಕು. ಪ್ರತಿಯೊಬ್ಬ ನೊಂದಾಯಿತ ಮಹಿಳಾ ಉದ್ಯಮಿಗಳಿಗೆ ಅವರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕವಾದ ಸಕಲ ಸವಲತ್ತು ಒಳಗೊಂಡ ಮಳಿಗೆಯನ್ನು ಕಲ್ಪಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಳಿಗೆ ಪಡೆದ ಉದ್ಯಮಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಹನ ನಿಲುಗಡೆ ಮೊದಲಾದ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. “ಪವರ್ ಪರ್ಬಾ” ನಡೆಯುವ ಸ್ಥಳದಿಂದ ಉಡುಪಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳೀಯ ಸಾರಿಗೆ ವ್ಯವಸ್ಥೆಯು ಲಭ್ಯವಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಯೋಜಕಿ ಸುಗುಣಾ ಸುವರ್ಣ ಮಾತನಾಡಿ, ಆಭರಣ, ಆಹಾರ, ಚಿತ್ರಕಲೆ, ಕರಕೌಶಲ್ಯ, ಗೃಹಾಲಂಕಾರ, ಸೌಂದರ್ಯವರ್ಧಕಗಳು, ಕ್ರಿಯಾತ್ಮಕ ವಸ್ತುಗಳು, ಸಿದ್ಧ ಉಡುಪುಗಳು, ವಿಶೇಷ ಆಕರ್ಷಣೆ, ಅಲಂಕಾರಿಕ ವಸ್ತುಗಳ ಮಳಿಗೆಗಳು ಪಾಲ್ಗೊಳ್ಳಲಿವೆ. ಈಗಾಗಲೇ ಮಳಿಗೆಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿಗೆ ಜನವರಿ 5 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಳಿಗೆ ಮಳಿಗೆಗಳ ನೋಂದಣಿ ಚೇ‌ರಮನ್ ಸುಪ್ರಿಯಾ ಕಾಮತ್ ಮೊಬೈಲ್ ಸಂಖ್ಯೆ 99801 52848, ಸುಗುಣಾ ಶಂಕರ್ ಸುವರ್ಣ ಮೊಬೈಲ್ ಸಂಖ್ಯೆ 99002 53365 ಅವರನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಪ್ರಿಯಾ ಕಾಮತ್, ನೋಂದಣಿ ಚೇ‌ರಮನ್ ಸುಪ್ರಿಯಾ ಕಾಮತ್, ಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್ ಇದ್ದರು.

spot_img

More articles

LEAVE A REPLY

Please enter your comment!
Please enter your name here