Friday, November 22, 2024

ಆದರ್ಶ ಚಿಂತನೆಗಳೇ ಜನನಾಯಕನ ಹೆಗ್ಗುರುತು: ರಕ್ತದಾನ ಶಿಬಿರ ಉದ್ಘಾಟಿಸಿ ಶಾಸಕ ಯಶಪಾಲ್ ಸುವರ್ಣ ಅಭಿಮತ

Must read

ಉಡುಪಿ: ಆದರ್ಶ ಮತ್ತು ಸಾಮಾಜಿಕ ಚಿಂತನೆಗಳಿಂದ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಜಗತ್ತಿಗೆ ಆದರ್ಶವಾದಾಗ ಮಾತ್ರ ಓರ್ವ ಜನನಾಯಕನ ಬದುಕು ಸಾಕಾರಗೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಅಂತಹ ಅದ್ಭುತ ವ್ಯಕ್ತಿತ್ವ ಹೊಂದಿದ ಜಾಗತಿಕ ನಾಯಕ. ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ರಕ್ತದಾನ ಶಿಬಿರಗಳಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣ ಸಂಭ್ರಮಾಚರಣೆ ಎಂದು ಶಾಸಕರಾದ ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟರು.

ಮಣಿಪಾಲದ ಕೆಎಂಸಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಉಡುಪಿ ನಗರದ ಎಸ್ ಟಿ ಮೋರ್ಚಾ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕೆಎಂಸಿ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಅವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಕ್ತದ ಬೇಡಿಕೆ ನಿರಂತರವಾಗಿದ್ದು ಓರ್ವ ದಾನಿ ನೀಡಿದ ರಕ್ತದ ಮೂಲಕ ನಾಲ್ಕಾರು ಜೀವವನ್ನು ಉಳಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಅವರು ರಕ್ತದಾನ ಮಾಡಿದರು.
ನಗರ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಸುಮಲತಾ ಶಿಬಿರವನ್ನು ಸಂಯೋಜಿಸಿ ಪ್ರಾಸ್ತಾವಿಕವಾಗಿ ಮಾತನಾಡಿರು.

ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗಡೆ, ರಕ್ತ ನಿಧಿ ಕೇಂದ್ರದ ಮುಖ್ಯಸ್ಥೆ ಡಾಕ್ಟರ್ ಶಮಿ ಶಾಸ್ತ್ರಿ, ಮಾನವ ಸಂಪನ್ಮೂಲ ಅಧಿಕಾರಿ ಸುಚೇತಾ, ಸಹಾಯಕ ನರ್ಸಿಂಗ್ ಅದೀಕ್ಷಕಿ ಶಕುಂತಲಾ ಶಾನ್ ಭೋಗ್, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ್, ಗಿರಿಧರ್ ಆಚಾರ್ಯ ಮತ್ತು ಅಶೋಕ್ ನಾಯ್ಕ, ಪಕ್ಷದ ಪದಾಧಿಕಾರಿಗಳಾದ ಸಂದ್ಯಾ ರಮೇಶ್, ನೀತಾ ಪ್ರಭು, ವೀಣಾ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಕಿಶೋರ್ ಕರಂಬಳ್ಳಿ, ದಯಾಶಿನಿ ಸರೋಜಾ ಶೆಣೈ, ಸುಧಾ ಪೈ, ನಿತಿನ್ ಪೈ, ರಾಘವೇಂದ್ರ ಕರ್ವಾಲ್, ಮಾಯ ಕಾಮತ್, ಪ್ರಭಾ ರಾವ್, ಸುಮ ನಾಯ್ಕ ಶರತ್ ನಾಯ್ಕ್ ಗಿರೀಶ್ ನಾಯ್ಕ್, ಸತೀಶ್ ನಾಯ್ಕ್, ಮತ್ತಿತರರು ಹಾಜರಿದ್ದರು.

spot_img

More articles

LEAVE A REPLY

Please enter your comment!
Please enter your name here