ಉಡುಪಿ: ಭಾರೀ ಮಳೆಯಿಂದ ಅಂಕೋಲಾ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಇಲಾಖೆ ಪ್ರಮಾಣಿಕರ ಹಿತದೃಷ್ಟಿಯಿಂದ ಹೆಚ್ಚುವರಿ ರೈಲು ವ್ಯವಸ್ಥೆ ಮಾಡಿದೆ.
ಮಾಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಮೀಸಲು ರೈಲು ಓಡಾಡಲಿದೆ. ಜುಲೈ 20, 21, 22ರಂದು ಎರಡು ಕೇಂದ್ರಗಳ ನಡುವೆ ಮೂರು ದಿನಗಳ ಕಾಲ ಸಂಚರಿಸಲಿದೆ. ಬೆಳಿಗ್ಗೆ ಮಾಡಗಾಂವ್ ಜಂಕ್ಷನ್‌ನಿಂದ 6 ಗಂಟೆಗೆ ಹೊರಡಲಿರುವ ವಿಶೇಷ ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು 7 ಗಂಟೆಗೆ ಮಡಗಾಂವ್ ತಲುಪಲಿದೆ . ಕಾಣಕೋಣ, ಕಾರವಾರ, ಹರ್ವಾಡ, ಅಂಕೋಲ ಜೊತೆ ಬಹುತೇಕ ಎಲ್ಲಾ ಸ್ಟೇಷನ್ಗಳಲ್ಲೂ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.