ಉಡುಪಿ: ಕಲಾ ಚಿತ್ರಗಳಿಗೆ ಕರಾವಳಿಯ ಸೊಗಡು ಇರುವ ಕಥಾವಸ್ತುಗಳು ಸೇರಿದಾಗ ದ್ವೀಪ, ಚೋಮನ ದುಡಿ, ಮೂಕಜ್ಜಿಯ ಕನಸುಗಳು ಮುಂತಾದ ಶ್ರೇಷ್ಠ ಚಿತ್ರಗಳು ಹೊರಹೊಮ್ಮುತ್ತವೆ . ಈ ರೀತಿಯ ಮತ್ತೊಂದು ಪ್ರಯೋಗಕ್ಕೆ ರಕ್ಷಿತ್ ಶೆಟ್ಟಿ ಅವರ ಪರಾಂವಃ ಸಂಸ್ಥೆ ಮುಂದಾಗಿದೆ.
‘ಏಕಂ’ ಎಂಬ ವೆಬ್ ಸೀರೀಸ್ ಬಿಡುಗಡೆಗೊಂಡಿದ್ದು ಇದರಲ್ಲಿ ಕರಾವಳಿಯ ರೋಚಕ ಘಟನೆಗಳನ್ನು ಕಥಾ ವಸ್ತುವಾಗಿ ಇಟ್ಟುಕೊಂಡು 7 ಕಿರು ಚಿತ್ರಗಳನ್ನು ತಯಾರಿಸಲಾಗಿದೆ. ಕರಾವಳಿಯ ಸಾಂಸ್ಕೃತಿಕ ಅನನ್ಯತೆ ವಿಶಿಷ್ಟ ಜೀವನಶೈಲಿ ಮತ್ತು ನಿಗೂಢವಾದ ಘಟನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿರ್ದೇಶಕರಾದ ಸುಮಂತ್ ಭಟ್ ಮತ್ತು ಸಂದೀಪ್ ಪಿ. ಎಸ್. ಈ ಸೀರೀಸ್ ಅನ್ನು ಜೌರ್ನಿಮನ್ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಕರಾವಳಿ ಕನ್ನಡ, ಕುಂದಗನ್ನಡ, ತುಳು ಬಾಷೆಗಳಲ್ಲಿ ಸಂಚಿಕೆಗಳು ಮೂಡಿ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಈ ವೆಬ್ ಸೀರೀಸ್ ಹೊಸ ದಾಖಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹೊರ ಜಗತ್ತಿಗೆ ಕರಾವಳಿಯ ಬಗ್ಗೆ ಹೊಸ ಹೊಳಹುಗಳನ್ನು ಈ ವೆಬ್ ಸೀರೀಸ್ ಕಟ್ಟಿ ಕೊಡಲಿದೆ. ಕಿರುಚಿತ್ರಗಳಿಗೆ ಬಹುತೇಕ ಕರಾವಳಿಯಲ್ಲಿ ಚಿತ್ರೀಕರಣ ನಡೆಸಿ ಇಲ್ಲಿಯ ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ಈ ಕಿರು ಚಿತ್ರಗಳ ಸಂಭಾಷಣೆಯು ಕಥೆಯನ್ನು ಮುನ್ನಡೆಸುವ ಜೊತೆಗೆ ಒಂದಷ್ಟು ಆಧ್ಯಾತ್ಮಿಕ ಎಳೆಗಳನ್ನು ಹೊಸಯುತ್ತಾ ಸಾಗುವುದು ಕಂಡು ಬರುತ್ತದೆ.
ಇಂದು ಬಿಡುಗಡೆಗೊಳ್ಳುತ್ತಿರುವ ಈ ವೆಬ್ ಸೀರೀಸ್ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಕೆಳಗಿನ ಲಿಂಕ್ ಮೂಲಕ ವೆಬ್ ಸೀರೀಸ್ ನೋಡಬಹುದಾಗಿದೆ.
https://shorturl.at/40xgI