Saturday, December 28, 2024

ಉಡುಪಿ: ಉಚಿತ ಉಪಕರಣ- ಅರ್ಜಿ ಆಹ್ವಾನ

Must read

ಉಡುಪಿ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಜಿಲ್ಲಾ ಔದ್ಯಮಿಕ ಕೇಂದ್ರ/ವೃತ್ತಿಪರ ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರದಗೆಲಸ, ದೋಬಿ, ಕಮ್ಮಾರಿಕೆ, ಪ್ಲಂಬರ್, ಎಲೆಕ್ಟ್ರಿಷಿಯನ್, ಕ್ಷೌರಿಕ, ಬ್ಯೂಟಿಪಾರ್ಲರ್ ಹಾಗೂ ಟೈಲರಿಂಗ್ ವೃತ್ತಿ ಮಾಡುವವರಿಗೆ ಗರಿಷ್ಠ 8,000 ಮೊತ್ತದ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಉಪಕರಣಗಳನ್ನು ಪಡೆಯಲಿಚ್ಛಿಸುವ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಕುಶಲಕಮಿಗಳಿಂದ ವೆಬ್‌ಸೈಟ್ (udupi.nic.in/zpudupi.karnataka.gov.in) ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, ಬಿ ಬ್ಲಾಕ್, ರೂಂ. ನಂ.207 ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಕಛೇರಿ ದೂರವಾಣಿ ಸಂಖ್ಯೆ: 0820-2574915 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಗ್ರಾಮಾಂತರ ಕೈಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here