ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಎರಡ್ಮೂರು ಮತಗಟ್ಟೆಗಳಲ್ಲಿ ಇವಿಎಂ ದೋಷದಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತು. ಉಳಿದಂತೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು.
ಬೆಳಿಗ್ಗೆ 9.30ರ ವೇಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 12.82ರಷ್ಟು ಮತದಾನವಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.15.1, ಉಡುಪಿಯಲ್ಲಿ ಶೇ.13.41, ಕಾಪುವಿನಲ್ಲಿ ಶೇ.14.63, ಕಾರ್ಕಳದಲ್ಲಿ ಶೇ.13.77, ಶೃಂಗೇರಿಯಲ್ಲಿ ಶೇ. 13.73, ಮೂಡುಗೆರೆಯಲ್ಲಿ ಶೇ. 11.32, ಚಿಕ್ಕಮಗಳೂರಿನಲ್ಲಿ ಶೇ. 10.96 ಹಾಗೂ ತರೀಕೆರೆಯಲ್ಲಿ 9.69ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ವೆಬ್ ಸೈಟ್ ನಿಂದ ತಿಳಿದುಬಂದಿದೆ.