ಉಡುಪಿ : ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡಿನಲ್ಲಿ ಮನ ಮಾತಾಗಿರುವ, ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ರುವ ಸತ್ಯನಾಥ ಸ್ಟೋರ್ಸ್ 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿ ಸಂಸ್ಥೆಯ ಎಲ್ಲ ವಸ್ತ್ರಮಳಿಗೆಗಳಲ್ಲಿ ಗ್ರಾಹಕರಿಗೆ “ದಂಪತಿಗಳ ಮಧುಚಂದ್ರ ಪ್ರವಾಸ ಕೂಪನ್” ಕೊಡುಗೆಯನ್ನು ಆಯೋಜಿಸಲಾಗಿದೆ.
ಮದುವೆಯ ಜವಳಿ ಖರೀದಿಸುವ ಗ್ರಾಹಕರಿಗೆ ಕೂಪನ್ ನೀಡಲಾಗುತ್ತದೆ. ಅದೃಷ್ಟಶಾಲಿ ವಿಜೇತರಿಗೆ ಮಧುಚಂದ್ರ ಪ್ರವಾಸ ಯೋಜನೆಯನ್ನು ಕಲ್ಪಿಸಲಿದೆ. ಈ ವರ್ಷ ಜುಲೈ ತಿಂಗಳಲ್ಲಿ ಅದೃಷ್ಟಶಾಲಿಗಳ ಡ್ರಾ ನಡೆಯಲಿದೆ. ತೀರ್ಥಹಳ್ಳಿ, ಬ್ರಹ್ಮಾವರ, ಕೊಪ್ಪ ಎಲ್ಲ ಮಳಿಗೆಗಳಲ್ಲಿ ಕೂಪನ್ ನೀಡಲಾಗುತ್ತದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ನೀಡಲಾಗುತ್ತಿದೆ. ಪ್ರಮುಖ ಕಂಪನಿಗಳ ಬ್ರಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಬಟ್ಟೆಬರೆಗಳು ಎಲ್ಲ ವಯಸ್ಸಿನ ವರಿಗೆ ಒಪ್ಪುವ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಸತ್ಯನಾಥ ಸ್ಟೋರ್ಸ್ ಪ್ರಖ್ಯಾತಿ ಪಡೆದಿದೆ.
ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಅಪಾರ ಸಂಗ್ರಹದ ಪರಿಪೂರ್ಣ ಮದುವೆ ಜವಳಿ ಮಳಿಗೆ ಇದಾಗಿದೆ. ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಕಂಚೀವರಂ, ಅರಣಿ, ಧರ್ಮಾವರಮ್, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್, ಕೊಲ್ಕತ್ತಾ, ಸೂರತ್, ಮಧುಬನಿ, ಚಪಾ, ಮೀನಾ, ಖಾತಾ, ಮನಭಾ, ಕೋಟ, ಪೋಚಂಪಪ್ಲಿ, ಇಕ್ಕತ್, ಪೈತನಿ, ನಾರಾಯಣಪೇಟ್ ಮುಂತಾದ ರೇಷ್ಮೆ ಸೀರೆಗಳ ಬೃಹತ ಸಂಗ್ರಹವಿದೆ.
ಪ್ರತಿಷ್ಠಿತ ಕಂಪನಿಗಳ ಫ್ಯಾನ್ಸಿ ಡಿಸೈನರ್ ಸೀರೆಗಳು ಮಹಿಳೆಯರ ಕುರ್ತಿಸ್, ಬೊಡಲ್ ಲೆಹೆಂಗಾ, ಜೂಡಿದಾರ ಗೌನ್ಸ್, ಡ್ರೆಸ್ ಮೆಟಿರೀಯಲ್ಸ್, ಪುರುಷರ ತರ್ಟ್ ಟಿ ಶರ್ಟ್ ಜೀನ್ಸ್ ಪ್ಯಾಂಟ್ ಮಕ್ಕಳ ವೆಸ್ಟರ್ನ್ ಡ್ರೆಸ್, ಫಾಕ್, ಚೂಡಿದಾರ ಗೌನ್ಸ್, ಹ್ಯಾಂಡೂಮ್ಸ್, ಬೆಡ್‌ಶೀಟ್, ಬ್ಯಾಂಕೆಟ್ ಇನ್ನಿತ ಬಟ್ಟೆಗಳ ಬೃಹತ್ ಸಂಗ್ರಹವಿದ್ದು, ಗ್ರಾಹಕರ ಆಯ್ಕೆಗೆ ವಿಫುಲ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.