Sunday, November 24, 2024

ಮಲ್ಪೆ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ: ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ

Must read

ಉಡುಪಿ: ಮಲ್ಪೆ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ವೈಭವದಿಂದ ನಡೆಯಿತು.

ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು ಮೆರವಣಿಗೆಗೆ ಚಾಲನೆ ನೀಡಿದರು. ಕೊಡವೂರು ದೇಗುಲದಿಂದ ಹೊರಟ ಮೆರವಣಿಗೆ ಸಿಟಿಜನ್ ಸರ್ಕಲ್ ಮಾರ್ಗವಾಗಿ ಶ್ರೀ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಸಾಗಿಬಂತು.
ಶಾಸಕ ಯಶ್ಪಾಲ್ ಸುವರ್ಣ ಅವರು ವಿವಿಧ ಟ್ಯಾಬ್ಲೋಗಳಿಗೆ ಚಾಲನೆ ನೀಡಿದರು. ಪೂರ್ಣಕುಂಭ, 101 ಚೆಂಡೆ, ಕೀಲು ಕುದುರೆ, ಕೊಂಬು, ವಾದ್ಯ, ಕುಣಿತ ಭಜನೆ, ತಟ್ಟಿರಾಯ, ನಾಸಿಕ್ ಬ್ಯಾಂಡ್, ಯಕ್ಷಗಾನ, ವಿವಿಧ ವೇಷಭೂಷಣಗಳು, ಟ್ಯಾಬ್ಲೋಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. 70ಕ್ಕೂ ಮಿಕ್ಕಿ ಹೊರೆ ಕಾಣಿಕೆಯ ವಾಹನಗಳು, 4 ಸಾವಿರಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಸಾಗಿಬಂದರು.

ಭಕ್ತವೃಂದ ವಡಭಾಂಡೇಶ್ವರ ವತಿಯಿಂದ ರಜತ ದೇವರಿಗೆ ರಜತ ಪ್ರಭಾವಳಿ, ಪಾಣಿಪೀಠ ಹಾಗೂ ಗರ್ಭಗುಡಿ ದ್ವಾರ ಬಾಗಿಲಿಗೆ ರಜತ ಕವಚವನ್ನು ಕೊಡುಗೆಯಾಗಿ ನೀಡಿದ್ದಾರೆ.
ದೇವಸ್ಥಾನದ ಪ್ರಧಾನ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿ. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರ್, ಅಧ್ಯಕ್ಷ ನಾಗರಾಜ್ ಮೂಲಿಗಾರ್, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್, ಅನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ಭಟ್, ಪವಿತ್ರಪಾಣಿ ಶಂಕರನಾರಾಯಣ ಐತಾಳ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷರಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ಪ್ರಮುಖರಾದ ತೋಟದಮನೆ ದಿವಾಕರ ಶೆಟ್ಟಿ, ನಾಗರಾಜ್ ಸುವರ್ಣ, ಕಿಶೋರ್ ಡಿ. ಸುವರ್ಣ, ಸುಭಾಸ್ ಮೆಂಡನ್, ರಾಮಚಂದ್ರ ಕುಂದರ್, ಹಿರಿಯಣ್ಣ ಕಿದಿಯೂರು, ಈಶ್ವರ್ ಸಾಲ್ಯಾನ್, ಶಶಿಧರ್ ಕುಂದರ್, ದಿನೇಶ್ ಸುವರ್ಣ, ಶರತ್ ಕುಮಾರ್, ಶೇಖರ್ ಜಿ. ಕೋಟ್ಯಾನ್, ಡಾ| ವಿಜಯೇಂದ್ರ, ದಯಾನಂದ ಕೆ. ಸುವರ್ಣ, ಮೀನಾಕ್ಷಿ ಮಾಧವ, ದಯಕರ್ ವಿ. ಸುವರ್ಣ, ಜ್ಞಾನೇಶ್ವರ್ ಕೋಟ್ಯಾನ್, ವಿಜಯ್ ಕೊಡವೂರು, ವಿಜಯ್ ಕುಂದರ್, ಪಾಂಡುರಂಗ ಮಲ್ಪೆ, ಬಾಲಕೃಷ್ಣ ಮೆಂಡನ್, ಧನಂಜಯ್ ಕಾಂಚನ್, ರತ್ನಾಕರ್ ಸಾಲ್ಯಾನ್, ವಿಜಯ ಸುವರ್ಣ, ಅಶೋಕ್ ಕೋಟ್ಯಾನ್, ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ಭಕ್ತವೃಂದ, ಗುರಿಕಾರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

spot_img

More articles

LEAVE A REPLY

Please enter your comment!
Please enter your name here