Monday, November 25, 2024

ಮಾ.10ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಉಡುಪಿ ಘಟಕದ ಉದ್ಘಾಟನೆ

Must read

ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌, ಮಂಗಳೂರು ಇದರ ಉಡುಪಿ ಘಟಕದ ಉದ್ಘಾಟನೆಯು ಇದೇ ಮಾ.10ರಂದು ಸಂಜೆ 6ಗಂಟೆಗೆ ಉಡುಪಿ ಅಂಬಾಗಿಲು ಅಮೃತ ಗಾರ್ಡನ್‌ನಲ್ಲಿ ಶ್ರೀ ಪಾವಂಜೆ ಮೇಳದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನದೊಂದಿಗೆ ನೆರವೇರಲಿದೆ ಎಂದು ಪಟ್ಲ ಟ್ರಸ್ಟ್‌ ನ ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಮಾಹೆಯ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಉಡುಪಿ ಘಟಕವನ್ನು ಉದ್ಘಾಟಿಸಲಿದ್ದಾರೆ. ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಯಕ್ಷಗಾನಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ, ಪಟ್ಲ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಟ್ರಸ್ಟ್‌ನ ಕೇಂದ್ರೀಯ ಸಮಿತಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಮೇರಿಕ, ಗಲ್ಫ್ ರಾಷ್ಟ್ರಗಳು, ದೆಹಲಿ, ಗುಜರಾತ್, ಮಹಾರಾಷ್ಟ್ರ, ಚೆನ್ನೈ, ಗೋವಾ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 39 ಘಟಕಗಳನ್ನು ಟ್ರಸ್ಟ್ ಹೊಂದಿದ್ದು, ಇದೀಗ ಉಡುಪಿಯಲ್ಲಿ 40ನೇ ಘಟಕ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಪಟ್ಟಾಭಿಮಾನಿ ಅಭಿವಂದನೆ, ವಿಶೇಷ ಬಾಲ-ಪುರಸ್ಕಾರ:
ನಿಟ್ಟೆ ವಿಶ್ವವಿದ್ಯಾಲಯದ ಜಪಾನ್ ಭಾಷಾತಜ್ಞರಾದ ಯುಸುಕೊ ಸತೋ ಮತ್ತು ಪ್ರೊ. ಹರಿಕೃಷ್ಣ ಭಟ್ ದಂಪತಿಗಳಿಗೆ ಪಟ್ಟಾಭಿಮಾನಿ ಅಭಿವಂದನೆ ಹಾಗೂ ಸತತವಾಗಿ 2 ಗಿನ್ನೆಸ್ ಪುರಸ್ಕೃತೆ ಯೋಗರತ್ನ ತನುಶ್ರೀ ಪಿತ್ರೋಡಿ ಅವರಿಗೆ ವಿಶೇಷ ಬಾಲಪುರಸ್ಕಾರವನ್ನು ಇದೇ ಸಂದರ್ಭದಲ್ಲಿ ಮಾಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಹರೀಶ್ ಜೋಷಿ ವಿಟ್ಲ, ಭುವನಪ್ರಸಾದ್ ಹೆಗ್ಡೆ ಮಣಿಪಾಲ, ರತನ್‌ರಾಜ್ ರೈ ಮಣಿಪಾಲ, ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here