Thursday, September 19, 2024

ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

Must read

ಬಂಟ್ವಾಳ: ಚಲಿಸುತ್ತಿರುವ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತ ಮಹಿಳೆಯನ್ನು ತುಮಕೂರು ಜಿಲ್ಲೆಯ ನಯನ ಎಂ.ಜಿ.(27) ಎಂದು ಗುರುತಿಸಲಾಗಿದೆ. ಅವರ ಬ್ಯಾಗ್ ನಲ್ಲಿ ಆಧಾರ್ ಕಾರ್ಡ್ ಸಿಕ್ಕಿದೆ. ನಯನಾ ಹೆಸರಿರುವ ಆ ಆಧಾರ್ ಕಾರ್ಡ್ ನಲ್ಲಿ ಕೇರ್/ಆಫ್ ಎಂ.ಗೋವಿಂದರಾಜು ಪಡಸಾಲೆಹಟ್ಟಿ, ಮಿಡಿಗೇಶಿ, ಮಧುಗಿರಿ ತಾಲೂಕು ತುಮಕೂರು ಜಿಲ್ಲೆ ಹೊಸಕರೆ ಎಂಬ ವಿಳಾಸವಿದೆ ಎಂದು ತಿಳಿದುಬಂದಿದೆ.

ಅವರು ಕಣ್ಣೂರು-ಬೆಂಗಳೂರು- ಮಂಗಳೂರು ರೈಲಿನಲ್ಲಿ ಬಂದಿದ್ದು, ಸುಮಾರು ಬೆಳಿಗ್ಗೆ 6.20 ಕ್ಕೆ ಬಿ.ಸಿ ರೋಡಿನ ನೇತ್ರಾವತಿ ನದಿಯ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ಕುಳಿತುಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ನ್ನು ರೈಲ್ವೆ ಸಿಬ್ಬಂದಿ ಬಿ.ಸಿ.ರೋಡಿನ ಕಚೇರಿಗೆ ತಲುಪಿಸಿ ಮಾಹಿತಿ ನೀಡಿದ್ದಾರೆ.

ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹವನ್ನು ಸ್ಥಳೀಯ ಮುಳುಗುತಜ್ಞ ಮಹಮ್ಮದ್ ಅವರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here