Friday, November 22, 2024

ಉಚ್ಚಿಲದಲ್ಲಿ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಗರ್ಭಿಣಿ ಹಸು ಸಾವು: ಮೆಸ್ಕಾಂ ವಿರುದ್ಧ ಆಕ್ರೋಶ

Must read

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ಸ್ಟೇ ವಯರ್‌ಗೆ ಸಿಲುಕಿ ಗರ್ಭಿಣಿ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ನಿನ್ನೆ ಸಂಜೆ ನಡೆದಿದೆ.

ಉಚ್ಚಿಲ ಭಾಸ್ಕರ ನಗರ ನಿವಾಸಿ ಇಸ್ಮಾಯಿಲ್‌ ಅವರ ತಿಂಗಳ ಗರ್ಭಿಣಿ ಹಸುವೊಂದು ಮೇವನ್ನು ಹರಿಸಿಕೊಂಡು ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ಬಂದಿದ್ದು, ಈ ವೇಳೆ ಹೆದ್ದಾರಿ ಬಳಿಯ ವಿದ್ಯುತ್ ಟ್ರಾನ್ಸ್ಫಾರ್ಮರ್‌ ಬಳಿ ಮೇಯುತ್ತಿದ್ದಾಗ ಟ್ರಾನ್ಸ್ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಹಳೆಯ ಜೋತು ಬಿದ್ದಿದ್ದ ಸ್ಟೇ ವಯರ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿದ ಪರಿಣಾಮ ಹಸುವಿಗೆ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಹಸು ಅಲ್ಲೇ ಅಸುನೀಗಿದೆ.
ಮಾಹಿತಿ ಪಡೆದ ಮೆಸ್ಕಾಂ ನಿರ್ವಾಹಕ ಸ್ಥಳಕ್ಕೆ ಬಂದು ವಿದ್ಯುತ್ ನಿಲುಗಡೆಗೊಳಿಸಿದ್ದಾರೆ.

ಸದಾ ಜನನಿಬಿಡ, ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಹಳೆಯ ಸ್ಟೇ ವಯರ್ ಹೊಂದಿದ್ದ ಈ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮರ್ಪಕ ನಿರ್ವಹಣೆ ಇಲ್ಲದೆ ಇಂತಹ ಅವಘಡ ಘಟಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶವ್ಯಕ್ತವಾಗಿದೆ.
ಮೆಸ್ಕಾಂ ಈ ಬಗ್ಗೆ ಕ್ರಮಕೈಗೊಂಡು ದನದ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here