ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಮಹಾಗಣಪತಿ ಸ್ಟೋನ್ ಕ್ರಷರ್ ಮಾಲೀಕನ ಮನೆ ಹಾಗೂ ಕಚೇರಿಗೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎರಡು ಇನೋವಾ ಕಾರಿನಲ್ಲಿ ಬಂದಿದ್ದ 12 ಜನ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ತೀರ್ಥಹಳ್ಳಿಯ ನ್ಯಾಷನಲ್ ಕನ್ ಸ್ಟ್ರಕ್ಷನ್ ನಲ್ಲಿ ಅಕ್ರಮದ ಅರೋಪದ ಹಿನ್ನಲೆಯಲ್ಲಿ ಇಡಿ ದಾಳಿ ನಡೆದಿದೆ. ನ್ಯಾಷನಲ್ ಕನ್ ಸ್ಟ್ರಕ್ಷನ್ ಗೆ ಗುಂಡ್ಯಡ್ಕದ ದಿನೇಶ್ ಶೆಟ್ಟಿ ಮಾಲೀಕತ್ವದ ಮಹಾಗಣಪತಿ ಕನ್ ಸ್ಟ್ರಕ್ಷನ್ ಮೆಟೀರಿಯಲ್ಸ್ ಪೂರೈಸುತ್ತಿತ್ತು. ಈ ಕಾರಣಕ್ಕಾಗಿ ದಾಳಿ ನಡೆಸಿದ ಅಧಿಕಾರಿಗಳು ಮಾಲೀಕ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕ್ರಷರ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಕ್ರಷರ್ ಮಾಲೀಕನ ಕಾರ್ಕಳ ಸಮೀಪದ ಸುಧೀಂದ್ರ ರೆಸಿಡೆನ್ಸಿಯಲ್ಲಿರುವ ಪ್ಲಾಟ್ ಮೇಲೂ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸತತ ನಾಲ್ಕು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.