ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬಲರಾಂ ಪರ್ಸೀನ್ ಬೋಟ್ ನವರಿಗೆ 400 ಕೆ.ಜಿ ತೂಕದ ಬೃಹತ್ ಗಾತ್ರದ ಮಡಲು ಮೀನು ದೊರೆತಿದೆ.
ಬಿಲ್‌ಫಿಶ್ ಹೆಸರಿನ ಈ ಮೀನನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂದು ಕರೆಯುತ್ತಾರೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪ ಎನ್ನುತ್ತಾರೆ ಮೀನುಗಾರರು.
ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ತಿಳಿಸಿದ್ದಾರೆ. ಈ ಭಾರೀ ಗಾತ್ರದ ಮೀನು ಇವತ್ತು ಮಲ್ಪೆಯಲ್ಲಿ ಆಕರ್ಷಣೆಯ ಕೇಂದ್ರಬಿಂದು ಎನಿಸಿತು.